ಕಾಮನ್ ವೆಲ್ತ್ ಗೇಮ್ಸ್ 2018: ಭಾರತದ ವೇಟ್ ಲಿಫ್ಟರ್ ಗಳ ಸಾಧನೆಗೆ ವಿಶೇಷ ಡಯಟ್, ಶಿಸ್ತು ಕಾರಣ!

21 ಕಾಮನ್ ವೆಲ್ತ್ ಗೇಮ್ ನಲ್ಲಿ ಭಾರತೀಯ ವೇಟ್ ಲಿಫ್ಟರ್ ಗಳು ಐದು ಚಿನ್ನದ ಪದಕ, ಎರಡು ಬೆಳ್ಳಿ ಹಾಗೂ ಹಲವು ಕಂಚಿನ ಪದಕವನ್ನು ಪಡೆಯುವ ಮೂಲಕ ವಿಶೇಷ ಸಾಧನೆ ಮೆರೆದಿದ್ದಾರೆ.
ಮೊದಲ ಚಿನ್ನದ ಪದಕ ಪಡೆದ ಭಾರತೀಯ ವೇಟ್ ಲಿಫ್ಟರ್ ಮೀರಾಬಾಯಿ ಚಾನು
ಮೊದಲ ಚಿನ್ನದ ಪದಕ ಪಡೆದ ಭಾರತೀಯ ವೇಟ್ ಲಿಫ್ಟರ್ ಮೀರಾಬಾಯಿ ಚಾನು

ಗೋಲ್ಡ್  ಕೋಸ್ಟ್ : 21 ಕಾಮನ್ ವೆಲ್ತ್ ಗೇಮ್ ನಲ್ಲಿ  ಭಾರತೀಯ ವೇಟ್ ಲಿಫ್ಟರ್ ಗಳು  ಐದು ಚಿನ್ನದ ಪದಕ, ಎರಡು ಬೆಳ್ಳಿ ಹಾಗೂ ಹಲವು ಕಂಚಿನ ಪದಕವನ್ನು ಪಡೆಯುವ ಮೂಲಕ ವಿಶೇಷ ಸಾಧನೆ ಮೆರೆದಿದ್ದಾರೆ.

ಆದರೆ, ಈ ಸಾಧನೆಗೆ ವಿಶೇಷ ಡಯಟ್ , ಶಿಸ್ತು ಪ್ರಮುಖ ಕಾರಣವಾಗಿದೆ.ಕಳೆದ ನಾಲ್ಕು ವರ್ಷಗಳಿಂದ ಪ್ರತಿವರ್ಷ ಸುಮಾರು 500 ಡೋಪ್ ಪರೀಕ್ಷೆ ನಡೆಸಲಾಗಿದೆ ವಿಶೇಷವಾಗಿ ಆಹಾರ ಕ್ರಮ ಹಾಗೂ ಪೌಷ್ಠಿಕಾಂಶಗಳ ಬಗ್ಗೆ ಜರ್ಮನಿಯವರಿಂದ  ಸಲಹೆ ಪಡೆಯಲಾಗಿದೆ.

 ಈ ತಂಡ ಕ್ರೀಡಾಕೂಟದ ಎಲ್ಲಾ ಅವಧಿಯನ್ನು ದೈಹಿಕ ತರಬೇತಿಗೆ  ಮಾತ್ರ ಸೀಮಿತಿಗೊಳಿಸುತಿರಲಿಲ್ಲ. ತರಬೇತಿ ಸಂದರ್ಭ ಒಬ್ಬ ತರಬೇತುದಾರ ಮಾತ್ರ ಇರುತ್ತಿರಲಿಲ್ಲ.  ಸ್ಪರ್ಧೆ ನಡೆಯುವ ಸ್ಥಳದಲ್ಲಿ  ಪ್ರತಿದಿನ   ಮೂವರು ಪ್ರವಾಸ ತರಬೇತುದಾರರು ಇರುತ್ತಿದ್ದರು.

 ಕಳೆದ ನಾಲ್ಕು ವರ್ಷಗಳಿಂದಲೂ ಈ ರೀತಿಯ  ಸಾಮರ್ಥ್ಯವನ್ನು ತೋರಿಸುತ್ತಾ ಬಂದಿದ್ದಾರೆ. ತರಬೇತಿ ಸಂದರ್ಭದಲ್ಲಿ ವೇಟ್ ಲಿಫ್ಟರ್ ಗಳಿಗೆ ಕೆಲ ರಚನಾತ್ಮಕ  ಬದಲಾವಣೆ ಮಾಡಲಾಗಿದೆ. 

ಪ್ರಮುಖವಾಗಿ ಆಹಾರ ಪದ್ಧತಿ ಹಾಗೂ ಪೌಷ್ಠಿಕಾಂಶಗಳ ಸಲಹೆ ವಿಚಾರದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ತರಬೇತುದಾರರ ವಿಜಯ್ ಶರ್ಮಾ  ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಎಲ್ಲಾ ಕ್ರೀಡೆಗಳಿಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಒಂದೇ ರೀತಿಯ ಆಹಾರ ನೀಡಲಾಗುತ್ತದೆ. ಆದರೆ, ಪ್ರತಿಯೊಂದು ಕ್ರೀಡೆಗೂ ವಿಭಿನ್ನವಾದ ಆಹಾರ ಪದ್ಧತಿ ಅಗತ್ಯವಿದೆ. ಜರ್ಮನಿಯಿಂದ ಮಟನ್, ಪೋರ್ಕ್ ಮತ್ತಿತರ ಪೌಷ್ಠಿಕಾಂಶಗಳ ಪ್ರತ್ಯೇಕ  ಆಹಾರ  ಒದಗಿಸುವಂತೆ ಕೇಳಲಾಗಿತ್ತು ಎಂದು ಅವರು ಹೇಳಿದ್ದಾರೆ.

ಮೀರಾ ಬಾಯಿ ಚಾನು ( 48 ಕೆಜಿ) ಸಂಜಿತಾ ಚಾನು ( 53 ಕೆಜಿ) ಸತೀಶ್ ಶಿವಲಿಂಗಂ (77 ಕೆಜಿ)  ವೆಂಕಟ್ ರಾಹುಲ್ ರಾಗಲಾ (85 ಕೆಜಿ)  ಮತ್ತು ಪುನಮ್ ಯಾದವ್ (69 ) ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.  ಈ ಮಧ್ಯೆ ಪಿ. ಗುರುರಾಜ್ ( 56 ಕೆಜಿ) ಪ್ರದೀಪ್ ಸಿಂಗ್ ( 105) ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.ವಿಕಾಸ್ ಠಾಕೂರ್ (94 ) ಕೆಜಿ ಮತ್ತು 18 ವರ್ಷದ ದೀಪಕ್ ಲಾಥರ್ ( 69 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಇವರೆಲ್ಲರೂ  10-12ಕ್ಕೂ ಹೆಚ್ಚು ರಾಷ್ಟ್ರೀಯ ಶಿಬಿರಗಳಲ್ಲಿ ಇವರು ಶಿಸ್ತಿನಿಂದ ಪಾಲ್ಗೊಂಡಿರುವುದಾಗಿ  2014ರ ಭಾರತೀಯ ಕೋಚ್ ಗಳ ಮುಖ್ಯಸ್ಥ ಶರ್ಮಾ ತಿಳಿಸಿದ್ದಾರೆ. 2014ರಿಂದಲೂ ಪ್ರತಿವರ್ಷ 500 ಡೋಪ್ ಪರೀಕ್ಷೆ ನಡೆಸಲಾಗಿದೆ.  ಆ ಮೂಲಕ ಆಥ್ಲೀಟ್ ಗಳಲ್ಲಿ ಇರುವ ಭಯವನ್ನು ಹೋಗಲಾಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

 ನಿನ್ನೆದಿನ 105 ಕೆಜಿ ವಿಭಾಗದಲ್ಲಿ ಪದಕ ಪಡೆದ  ಗುರುದೀಪ್ ಸಿಂಗ್  ಅವರಿಗೆ ಬೆನ್ನು ನೋವಿನ ಸಮಸ್ಯೆಯಿಂದ ದೈಹಿಕ ಸಾಮರ್ಥ್ಯವೂ ನಿರ್ಣಾಯಕವಾಗಿತ್ತು. ಆದರೆ, ನಾವು ಏನನ್ನೂ ಮಾಡಲಾಗಲಿಲ್ಲ. ಆದರೆ. ಈಗ ಸಂಬಂಧಿತ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದು, ಮುಂದೆ ಇಂತಹ ಪರಿಸ್ಥಿತಿ ಸಂಭವಿಸದಂತೆ ಕ್ರಮ ಕೈಗೊಳ್ಳವಂತೆ ತಿಳಿಸಲಾಗಿದೆ ಎಂದು ಶರ್ಮಾ ಹೇಳಿದ್ದಾರೆ.





ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com